ಪ್ರಮಥಗಣ - 
ಜನನ ಮರಣಾತೀತರಾಗಿ ಕೈಲಾಸದಲ್ಲಿ ನೆಲಸಿರುವ ಗಣಗಳಲ್ಲಿ ಕೆಲವರನ್ನು ಈ ಹೆಸರಿನಿಂದ ಕರೆಯುತ್ತಾರೆ. ಇವರು ಶೈವಧರ್ಮದ ಪ್ರಾಚೀನ ಕಾಲದ ಮಹಾನುಭಾವರು. ಪಾಲ್ಕುರಿಕೆ ಸೋಮನಾಥನ ಗಣಸಹಸ್ರನಾಮಾವಳಿಯಲ್ಲಿ ಹಾಗೂ ಪಂಡಿತಾರಾಧ್ಯರ ಸಂಸ್ಕøತ ಗಣ ಸಹಸ್ರ ನಾಮಾವಳಿಯಲ್ಲಿ ಶ್ರೀನಂದೀಶ್ವರನಿಂದ ಹಿಡಿದು ಪಾದುಬಾಹುವಿನವರೆಗಿರುವ 469 ಜನರನ್ನು ಪ್ರಥಮಗಣವೆಂದು ಭಾವಿಸಲಾಗಿದೆ.
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ